Thursday, August 20, 2009

ಶಿಕ್ಷಣ ಕ್ಷೇತ್ರದಲ್ಲಿ ಬುರ್ಕಾ ವಿವಾದ: ರಗಳೆ ಬೇಕಿತ್ತಾ?

ದು 13ವರ್ಷಗಳ ಹಿಂದಿನ ಸಂಗತಿ, ಬಿಜೆಪಿಯ ರಾಜ್ ನಾಥ್ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಂಧರ್ಭ. ಈಗಿನಂತೆ ದೇಶದೆಲ್ಲೆಡೆಯೂ ಬಿಜೆಪಿಗೆ ಅಧಿಕಾರವಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಏನನ್ನಾದರೂ ಹೊಸತನ್ನು ಮಾಡುವ, ಜನತೆಯ ಗಮನವನ್ನು ತಮ್ಮೆಡೆಗೆ ಸೆಳೆಯುವ ಉತ್ಸಾಹವಿತ್ತು. ಅದಕ್ಕೆ ತಕ್ಕಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಂತಕರ ಚಾವಡಿಯ ಸಲಹೆ ಮಾರ್ಗದರ್ಶನವೂ ಇರುತ್ತಿತ್ತು. ಇಂಥಹ ಸಂಧರ್ಭದಲ್ಲಿಯೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ರಾಜನಾಥ್ ಸಿಂಗ್ ದೆಹಲಿಯ ಕಾಲೇಜು ವಿದ್ಯಾರ್ಥಿಗಳಿಗೆ ವಸ್ತ್ರನೀತಿ ಸಂಹಿತೆಯನ್ನು ಜಾರಿಗೆ ತಂದಿದ್ದರು. ದೇಶದಲ್ಲಿ ಪ್ರಥಮ ಭಾರಿಗೆ ಜಾರಿಗೆ ಬಂದ ಈ ನೀತಿ ಅಂದು ರಾಷ್ಟ್ರಾಧ್ಯಂತ ಚರ್ಚೆಗೊಳಪಟ್ಟಿತ್ತು. ಇಂತಹ ನಿಲುವಿನ ಹಿಂದೆ ಸಿಂಗ್ ರ ಒತ್ತಾಸೆಯೂ ಸೂಕ್ತವಾಗಿಯೇ ಇತ್ತು. ವಯಸ್ಸಿಗೆ ಬಂದ ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರು ಕಾಲೇಜಿಗೆ ಬರುವಾಗ ತಮ್ಮ ಕಾಲು-ತೊಡೆ-ಹೊಟ್ಟೆ-ಬೆನ್ನು ಕಾಣಿಸುವಂತೆ ಬಟ್ಟೆ ಧರಿಸುವುದು, ಬಿಗ್ಗ ಬಿಗಿಯಾದ ಜೀನ್ಸ್ -ಟೀ ಶರ್ಟು ಧರಿಸಿ ಅಂಗಸೌಷ್ಟವ ತೋರಿಸುತ್ತಾ ಬಳುಕುತ್ತಾ ಬರುವುದು ವಿವಿಧ ರೀತಿಯ ಭಾವನೆಗಳಿಗೆ ಆಸ್ಪದ ನೀಡುತ್ತದೆ ಎಂಬುದೇ ವಸ್ತ್ರ ನೀತಿ ಸಂಹಿತೆಗೆ ಕಾರಣವಾಗಿತ್ತು. ಆಗ ದೇಶದ ಆಂಗ್ಲ ಪತ್ರಿಕೆಗಳು ಹಾಗೂ ಬೆರಳೇಣಿಕೆಯ ಸಂಖ್ಯೆಯಲ್ಲಿದ್ದ ದೃಶ್ಯ ವಾಹಿನಿಗಳು ಇಂತಹ ನೀತಿಸಂಹಿತೆಯೇ ತಪ್ಪು ಎಂಬಷ್ಟರ ಮಟ್ಟಿಗೆ ಚರ್ಚೆಯನ್ನು ತಂದಿದ್ದವು. ನಮ್ಮ ಯುವಜನರ ಮನಸ್ಥಿತಿಯೂ ಆ ಸಂಧರ್ಭಕ್ಕೆ ಪೂರಕವಾಗಿತ್ತು, ಅಷ್ಟೊತ್ತಿಗಾಗಲೇ ಜಾಗತೀಕರಣದ ಗಾಳಿ ದೇಶಕ್ಕೆ ಕಾಲಿಡಲಾರಂಬಿಸಿತ್ತು.!
ಹೌದು ಇದೆಲ್ಗ್ಯಾ ಈಗ್ಯಾಕೆ ನೆನಪಾಯ್ತು ಅಂತೀರಾ? ಕಳೆದ 2-3ದಿನಗಳಿಂದ ಕೋಮುಸೂಕ್ಷ್ಮ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದ ಬಂಟ್ವಾಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುರ್ಕಾ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಬುರ್ಕಾ ತೆಗೆದು ಬರುವಂತೆ ಸಹಪಾಠಿ ಬಿದ್ಯಾರ್ಥಿಗಳು ಸೂಚಿಸಿದ್ದಾರೆ. ಆದರೆ ಮರುದಿನ ತಲೆಗೆ ಸ್ಕಾರ್ಪ ಧರಿಸಿ ಬಂಧಿದ್ದಾಳೆ, ಅದನ್ನು ತೆಗೆದು ಬರದಿದ್ದರೆ ಹುಡುಗರು ಕೇಸರಿ ಪಟ್ಟಿ ಮತ್ತು ಕೇಸರಿ ಬಟ್ಟೆ ಧರಿಸಿ ಬರುವ ಮಾತನಾಡಿದ್ದಾರೆ. ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲರು ಸದರಿ ವಿದ್ಯಾರ್ಥಿನಿಯ ಪೋಷಕರನ್ನು ಕರೆಸಿ ಪರಿಸ್ಥಿತಿಯನ್ನು ಅರುಹಿ ಎಲ್ಲ ವಿದ್ಯಾರ್ಥಿಗಳಂತೆ ಬರದಿದ್ದರೆ ವರ್ಗಾವಣೆ ಪತ್ರ ಪಡೆಯುವಂತೆ ತಿಳಿಸಿದ್ದಾರೆ. ಆದರೆ ಅವರ ಮನವಿಗೆ ಕೇರ್ ಮಾಡದ ವಿದ್ಯಾರ್ಥಿನಿ ವಿಷಯವನ್ನು ದೊಡ್ಡದು (ಅದರ ಹಿಂದಿನ ಶಕ್ತಿಗಳು ಬೇರೆಯದೇ ಇರಬಹುದೇನೋ) ವಿಶ್ವ ವಿದ್ಯಾನಿಲಯಕ್ಕೆ ಹಾಗೂ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.. ಈಗ ಈ ಬಗ್ಗೆ ಉತ್ತರಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ಮತ್ತು ಆಡಳಿತ ಮಂಡಳಿಗೆ ನೋಟೀಸು ಜಾರಿ ಮಾಡಲಾಗಿದೆ. ಇಂತಹ ಸಂಧರ್ಭದಲ್ಲಿ ನಮ್ಮ ಮುಂದಿರುವ ಪ್ರಶ್ನೆ ಇಷ್ಟೇ.. ಯಾವ ಸಂಸ್ಕೃತಿಯೇ ಇರಲಿ ಅದು ಅವರವರ ಖಾಸಗಿ ಜೀವನಕ್ಕೆ ಮಾತ್ರ ಸೀಮಿತವಾಗಿರಬೇಕೆ ವಿನಹ ಬಹಿರಂಗ ಪ್ರದರ್ಶನವಾಗಬೇಕಿಲ್ಲ ಅಲ್ಲವೇ? ಒಂದು ವೇಳೆ ಪ್ರದರ್ಶನವಾದರೂ ಅದು ಪ್ರಶ್ನಾತೀತವಾಗಿರಬೇಕೇ ವಿನಹ ಪ್ರಶ್ನೆಗೆ ಎಡೆ ಮಾಡುವಂತಿರಬಾರದು. ಅದರಲ್ಲೂ ಕೋಮು ಭಾವನೆಗಳು ಪದೇ ಪದೇ ಜಾಗೃತಾವಸ್ಥೆಯಲ್ಲಿರುವ ಪ್ರದೇಶಗಳಲ್ಲಿ ಎಚ್ಚರಿಕೆ ಅಗತ್ಯ. ಇಷ್ಟು ದಿನಗಳು ಇಲ್ಲದ ವಿವಾದ ಈಗೇಕೆ ಇದು ವಿವಾದ ರೂಪ ಪಡೆದುಕೊಂಡಿದೆ ಎಂಬ ಪ್ರಶ್ನೆಗೆ ಉತ್ತರವೂ ಅಲ್ಲೇ ಇದೆ..!
ಕಳೆದ 7-8ವರ್ಷಗಳಿಂದಲೂ ದ.ಕ. ಜಿಲ್ಲೆಯ ಪರಿಸ್ಥಿತಿ ಹದಗೆಟ್ಟಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಇರಲಿ ಆ ವಿಷಯ ಮತ್ತೊಮ್ಮೆ ಚರ್ಚಿಸೋಣ., ಈಗ ಒಂದು ಘಟನೆಯನ್ನು ನಿಮ್ಮ ಮುಂದಿಡುತ್ತೇನೆ. ಮೊನ್ನೆ ಮೊನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ಉತ್ಸವದ ಸಂಧರ್ಭದಲ್ಲಿ ಭಾಗವಹಿಸಿದ್ದ ಶಾಲಾ ತಂಡದ ಬಾಲಕಿಯರು ದ್ವಜವಂದನೆ ಪರೇಡ್ ನಲ್ಲಿ ಭಾಗವಹಿಸಿದ್ದಾಗಲೂ ತಲೆಗೆ ಕಪ್ಪು ಸ್ಕಾರ್ಫ ಕಟ್ಟಿದ್ದರು.., ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರನ್ನು ಪ್ರಶ್ನಿಸಿದಾಗ ಅವರು ಅಸಹಾಯಕತೆ ವ್ಯಕ್ತಪಡಿಸಿದರು. ಹಲವಾರು ಬಾರಿ ಗೌಸು ಮತ್ತು ಸ್ಕಾರ್ಫ ತೆಗೆಯುವಂತೆ ಸೂಚಿಸಿದರು ಸಹ ಕೇರ್ ಮಾಡದ ವಿದ್ಯಾರ್ಥಿನಿಯರು ಹಾಗೆಯೇ ಬಂದಿದ್ದರಂತೆ. ಇದನ್ನೆ ಯಾರಾದರೂ ಸೂಕ್ಷ್ಮವಾಗಿ ಗಮನಿಸಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಹಿಡಿದವರನ್ನು ಬಂದಿಸುವ ಪೊಲೀಸರು , ಮತ್ತು ಕಂದಾಯ ಇಲಾಖೆ ಇಂತಹ ಸನ್ನಿವೇಶಗಳಲ್ಲಿ ಮೌನವಹಿಸುವುದು ಯಾಕೆ? ಇನ್ನೊಂದು ಪ್ರಕರಣದಲ್ಲಿ ಕ್ರೈಸ್ತ ಧರ್ಮಿಯರ ಶಾಲೆಯಲ್ಲಿ ಹಣೆಗೆ ಕುಂಕುಮ ಇಡುವ ಮಕ್ಕಳು ಕಡ್ಡಾಯವಾಗಿ ಬಿಂದಿ ಇಡುವಂತೆ ಸೂಚಿಸಲಾಗಿದೆ, ಶಾಲೆಗೆ ಬಂದ ತಕ್ಷಣ ಬಿಂದಿ , ಹೂವು ತೆಗೆದಿರಿಸಿ, ದೇಶಗೀತೆ ಗೆ ಮುನ್ನ ಏಸು ಪ್ರಾರ್ಥನೆ ಮಾಡಿಸುವ ಶಾಲೆಗಳು ನಮ್ಮ ನಡುವೆಯೇ ಇವೆ. ಇದು ನಮ್ಮ ಭಾರತೀಯ ಸಂಸ್ಕೃತಿಯೇ? ಬಹುಸಂಖ್ಯಾತ ಹಿಂದುಗಳಿರುವ ದೇಶದಲ್ಲಿ ಪರಸ್ಪರರ ನಡುವೆ ಸೌಹಾರ್ಧಯುತವಾದ ವಾತಾವರಣವಿದೆ. ಇಲ್ಲಿ ಹೂವು ಮುಡಿಯುವುದು, ಬಿಂದಿ ಇಡುವುದು ಮತ್ತು ಇವೆರಡನ್ನು ಮಾಡದಿರುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ. ಇವು ತೀರಾ ಡಾಳಾಗಿ ಪ್ರದರ್ಶಿತವಾಗದ ವಿಚಾರಗಳು ಆದರೆ ವಸ್ತ್ರ ಧರಿಸುವ ವಿಚಾರವಿದೆಯಲ್ಲ ಇದು ಕಡ್ಡಾಯವಾಗಿ ಏಕರೂಪದ್ದಾಗಿರಬೇಕು ಅನಿಸುವುದಿಲ್ಲವೇ? ಶಾಲೆಗೆ ಬರುವವರೆಗೆ ಬುರ್ಕಾ ಧರಿಸಲು ಆಬ್ಯಂತರವಿಲ್ಲ ಆದರೆ ಶಾಲಾವರಣಕ್ಕೆ ಬಂದ ಮೇಲೇ ಬುರ್ಕಾ ತೆಗೆಯಲೇಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರದ ಸಮಾನ ಸಮವಸ್ತ್ರ ನೀತಿಗೆ, ಭಾವನೆಗಳಿಗೆ ಧಕ್ಕೆ ಯಾಗುತ್ತದೆ. ರಾಜ್ಯದ ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಇಲ್ಲ ಇಲ್ಲಿಯೂ ಶಿಕ್ಷಣದ ಎಲ್ಲ ಹಂತಗಳಲ್ಲು ಕಡ್ಡಾಯ ಸಮವಸ್ತ್ರನೀತಿ ಜಾರಿಗೆ ಬರಬೇಕಾಗುತ್ತದೆ. ನಮ್ಮ ಮುಸಲ್ಮಾನ ಭಾಂಧವರು ಸಹಾ ಈ ನಿಟ್ಟಿನಲ್ಲಿ ಸಹಕರಿಸಬೇಕಾದ ಅಗತ್ಯವಿದೆ. ಮುಸ್ಲಿಂ ಕಾನೂನು ಸಹಾ ಬುರ್ಕಾ ಸಂಸ್ಕೃತಿಯೇ ಭಾಗವೇ ವಿನಹ ಇದನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕೆಂದು ಎಲ್ಲಿಯೂ ಹೇಳುವುದಿಲ್ಲ. ವಿವಾದ ಕುರಿತಂತೆ ಗಮನ ಸೆಳೆದಾಗ ಮುಸ್ಲಿಂ ಬುದ್ದಿ ಜೀವಿ ಖ್ಯಾತ ಲೇಖಕ ಮೌಲಾನಾ ಮೊಹಿಯುದ್ದೀನ್ ಖಾನ್ ಸಹಾ ಇದನ್ನೆ ಹೀಗೆ ಹೇಳಿದ್ದಾರೆ "Burqa is not a Part of Islam. It is a part of culture that the people of subcontinent havebeen folloing since ages. Nobody can enforce a dress code in the name of Islam. It is categorically Un-Islamic ".
ಇನ್ನೊಂದು ವಿಚಾರ ರಾಜ್ಯ ಸರ್ಕಾರ ಈಗಾಗಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ಸಮವಸ್ತ್ರ ನೀತಿ ಜಾರಿಗೆ ತರಲು ನಿರ್ದರಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಇಲ್ಲವೇ ಈ ವರ್ಷದ ಅಂತ್ಯದಿಂದಲೇ ಈ ನೀತಿ ಜಾರಿಯಾದರೆ ಅಚ್ಚರಿಯಿಲ್ಲ. ಮುಖ್ಯವಾಗಿ ಶಾಲಾ ಶಿಕ್ಷಕರಿಗೆ ಸಮವಸ್ತ್ರ ನೀತಿ ಜಾರಿಯಾಗಬೇಕಾಗಿದೆ, ವಿದ್ಯಾರ್ಥಿಗಳು ಶಿಕ್ಷಕರನ್ನೇ ವಿಚಾರ ಚಿಂತನೆಗಳಲ್ಲಿ , ಸಮವಸ್ತ್ರ ಧರಿಸುವ ವಿಧಾನಗಳಲ್ಲಿ ಅನುಸರಿಸುವ ಗಮನಿಸುವ ಸನ್ನಿವೇಶಗಳಿರುವುದರಿಂದ ಶಿಕ್ಷಕರು ಶಿಸ್ತಿನಿಂದ ಶಾಲೆಗಳಿಗೆ ಬರಬೇಕಾಗುತ್ತದೆ. ಇತ್ತೀಚೆಗೆ ಶಾಲಾ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂಧರ್ಭ ಡಿ ಇಡಿ/ಬಿಇಡಿ ಪ್ರಶಿಕ್ಷಣಾರ್ಥಿಗಳಿಬ್ಬರು ರೌಡಿ ಗ್ಯಾಂಗಿನ ಸದಸ್ಯರಂತೆ ಜುಟ್ಟು ಬಿಟ್ಟುಕೊಂಡು ಫ್ಯಾಶನ್ ಶರ್ಟು-ಪ್ಯಾಂಟು ಹಾಕಿಕೊಂಡು ವಿದ್ಯಾರ್ಥಿನಿಯರ ಹೆಗಲ ಮೇಲೆ ಕೈಹಾಕಿಕೊಂಡು ಓಡಾಡುತ್ತಿದ್ದರು. ಇನ್ನು ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ ಶಿಕ್ಷಕ/ಶಿಕ್ಷಕಿಯರೇ ಅತಿಯಾದ ವೇಷಭೂಷಣ ಮಾಡಿಕೊಂಡು ಡಾಳಾಗಿ ಕಾಣುತ್ತಿದ್ದರು. ತಲೆಗೆ ಕ್ಯಾಪು, ಕೈಗೆ ದಾರ, ಕೊರಳಿಗೆ ದೊಡ್ಡ ಡಾಲರ್ (ಸಿನಿಮಾ ಹೀರೋಗಳು/ಪಡ್ಡೆಗಳು ಹಾಕುವಂತಹದ್ದು) 8ಜೇಬಿನ ಪ್ಯಾಂಟು, ಹೆಗಲಮೇಲಿನ ಪಟ್ಟಿಯ ಶರ್ಟು, ಕಣ್ಣಿಗೆ ಸ್ಟ್ಯಲು ಗ್ಲಾಸು,ಎದ್ಸು ಕಾಣುವ ಲಿಪ್ ಸ್ಟಿಕ್, ಮೆತ್ತಿಕೊಂಡಂತಿರುವ ಪೌಡರು, ಚೂಡಿದಾರ ಅಲಿಯಾಸ್ ಪಂಜಾಬಿ ಡ್ರೆಸ್, ತೊಳಿಲ್ಲದ ರವಿಕೆ ಇವನ್ನೆಲ್ಲ ಶಾಲೆಗೆ ಶಿಕ್ಷಕ/ಶಿಕ್ಷಕಿಯರು ಧರಿಸಿ ಬಂದರೆ ಮಕ್ಕಳ ಪರಿಸ್ಥಿತಿಯಾದರೂ ಏನಾಗಬೇಕು ಹೇಳಿ? ಅದಕ್ಕೆಂದೇ ಹೇಳಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕಡ್ಡಾಯವಾಗಿ ಸಮಸ್ತರಿಗೂ ಏಕರೂಪ ಸಮವಸ್ತ್ರ ಸಂಹಿತೆ ಜಾರಿಯಾಗಬೇಕು.
ಸಧ್ಯ ಬಂಟ್ವಾಳದಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಜಿಲ್ಲಾಡಳಿತ ಸೂಕ್ಷ್ಮವಾಗಿ ನಿಭಾಯಿಸಿ ಸಂಬಂಧಿತರಿಗೆ ತಿಳುವಳಿಕೆ ಹೇಳಬೇಕು. ಈ ವಿಚಾರದಲ್ಲಿ ಯಾವುದೇ ಧಾರ್ಮಿಕ ವಿಚಾರಗಳಿಗೆ ಆದ್ಯತೆ ನೀಡಬೇಕಾದ ಮತ್ತು ಓಲೈಸಬೇಕಾದ ಅಗತ್ಯವೂ ಇಲ್ಲ. ಯಾರದ್ದು ಸರಿ ಯಾರದ್ದು ತಪ್ಪು ಎಂಬ ವಿಮರ್ಶೆಯೂ ಅನಗತ್ಯ, ಏಕೆಂದರೆ ವಿಚಾರ ಸಮರ್ಥನೆಗೆ ಅವರವರದ್ದೇ ನೆಲೆಗಟ್ಟಿನಲ್ಲಿ ತಾತ್ವಿಕ ಅಭಿಪ್ರಾಯಗಳು ಇರುತ್ತವೆ. ಅವು ಸಮಸ್ಯೆ ಪರಿಹಾರದ ಬದಲು ಉಲ್ಭಣವಾಗುವಂತೆ ಮಾಡಬಹುದಲ್ಲವೇ? ಇಲ್ಲದಿದ್ದಲ್ಲಿ ಇದು ರಾಜ್ಯಾಧ್ಯಂತ ಹಬ್ಬಿ ಇನ್ನೊಂದು ದೊಡ್ಡ ತಲೆನೋವಾಗುವುದು ಖಚಿತ.ಈ ವಿಚಾರದಲ್ಲಿ ನಿಮ್ಮ ಅನಿಸಿಕೆಗಳನ್ನು ಹೇಳಲು ನೀವೂ ಮುಕ್ತರು. ಒಂದು ಆರೋಗ್ಯವಂತ ಚರ್ಚೆಯೂ ಸಹಾ ಉತ್ತಮ ವಾತಾವರಣಕ್ಕೆ ನಾಂದಿಯಾಗ ಬಹುದು.

8 comments:

ಎಚ್.ಎನ್. ಈಶಕುಮಾರ್ said...

ಅವರವರ ಸ್ವತಂತ್ರಕ್ಕೆ ದಕ್ಕೆ ಬರದಂತೆ,ಅವ್ರಿಗೆ ಇಷ್ಟವಾದ ಉಡುಪುಗಳು ಇತರರನ್ನು ಪ್ರಚೋದಿಸದೆ ಇದ್ದರೆ ಎಲ್ಲರಿಗು ಅದರ ಜೊತೆಗೆ ಸಮಾಜಕ್ಕೂ ಒಳಿತು..ನಿಮ್ಮ ಬರಹ ಸೂಕ್ಷ್ಮತೆ ಚೆನ್ನಾಗಿದೆ..ಒಮ್ಮೆ ನನ್ನ ಬ್ಲಾಗ್ ನೋಡಿ ನಿಮ್ಮ ಅಭಿಪ್ರಾಯ ಬರೆಯಿರಿ.....sahayaatri.blogspot.com

prashant natu said...

rajnath sing mukhyamantriyagiddu uttar pradesh kke delhi ge alla sir...

ಸಿ ಜಯಕುಮಾರ್ said...

ಹೌದು ಸರ್ ಈ ಬಗ್ಗೆ ಕನ್ಪ್ಯೂಸ್ ಇತ್ತು, ಸ್ನೇಹಿತರು ದೆಹಲಿ ಮುಖ್ಯಮಂತ್ರಿಯಾಗಿದ್ದರು ಅಂದರು. ಅದಕ್ಕಾಗಿ ಹಾಗೆ ಬರೆದೆ, ಬ್ಲಾಗ್ ಪೋಸ್ಟ್ ನಲ್ಲೂ ಅದನ್ನು ತಿದ್ದುಪಡಿಮಾಡಿದ್ದೇನೆ. ನಿಮ್ಮ ಸಲಹೆ ಮಾರ್ಗದರ್ಶನ ಹೀಗೆಯೇ ಮುಂದುವರೆಯಲಿ... ಧನ್ಯವಾದಗಳು.

ಎಚ್.ಎನ್. ಈಶಕುಮಾರ್ said...

houdu sir nimma beti aagiddu hotelnalli tindi tindaddu ella nenapaayitu.....nanna blognalli nimma blogna link kodabahude tilisi saadyavaadare nannadanna nimmadaralli haaki sigona matte matte danyavaada jayakumar

ಅರಕಲಗೂಡುಜಯಕುಮಾರ್ said...

ಸರ್,
ನಿಮ್ಮ ಬ್ಲಾಗ್ ಲಿಂಕ್ ಅನ್ನು ನನ್ನ ಬ್ಲಾಗ್ ನಲ್ಲಿ ಹಾಕಿದ್ದೇನೆ, ನೀವು ಕೂಡ ನನ್ನ ಬ್ಲಾಗ್ ಲಿಂಕ್ ಅನ್ನು ನಿಮ್ಮ ಬ್ಲಾಗ್ ಲಿಸ್ಟ್ ನಲ್ಲಿ ಸೇರಿಸಬಹುದು.ಅವಕಾಶವಾದರೆ ಒಮ್ಮೆ ಸೇರೋಣ ಅಲ್ಲಿಯವರೆಗೂ ಬ್ಲಾಗ್ ಲೋಕದಲ್ಲಿ ನಮ್ಮ ಭೇಟಿ ನಿರಂತರವಾಗಿರಲಿ...
ಧನ್ಯವಾದಗಳು

ಎಚ್.ಎನ್. ಈಶಕುಮಾರ್ said...

sir nimma blog link nanna blognalli haakiddene danyavaada nimmalli nanna link haakidakke betiyaagona sir matte...

D.G.Sampath said...

hai jayaraam,
when i hear some thing about Arakaldud, I get exited. because I was there for a brief period studying in Maadihalli Mallkarjunaiah high school.My younger sister was a teacher there for a brief period.My father was the Head Master of Govt middle school which is i n between kote and pete. I was there in Mallipatna and Aladahalli which gives me the mixed climate of Malnaad and bayalu seeme, which I do not forget. Please write some thing connected to this taluk. I am the admirer of A.Na.Kru.who hails from this place.I am also a writer in kannada and many of my articles are published in various small papers and thats kannada regularly. Recently a short story "Mooka vedane" by title about animals has been published in thats kannada (30th August 2009) Your article on uniform code is really educative.I really do not know how to type in kannada in computers except doing it in Baraha. Will you please educate me in this regard,so that we can communicate in kannada only.Dayavittu hege computernalli kannda balasuvudu ennuvudannu helikodi.Naanu saha arakalagudinavane agiddene. nanage malenaadendare praana. sahakarisi.
dhanyavaadagalu
nimmava
sampath sakaleshapra

ಅರಕಲಗೂಡುಜಯಕುಮಾರ್ said...

ಪ್ರಿಯ ಡಿ ಜಿ ಸಂಪತ್ ರವರಿಗೆ,
ನಾನು ಅರಕಲಗೂಡು ಜಯಕುಮಾರ್, ಜಯರಾಮ್ ಅಲ್ಲ. ನೀವು ಅರಕಲಗೂಡು ಮತ್ತು ಇಲ್ಲಿನ ಪರಿಸರದ ಬಗ್ಗೆ ಇಟ್ಟುಕೊಂಡಿರುವ ಕುತೂಹಲ ಮತ್ತು ಕಾಳಜಿಗೆ ತುಂಬಾ ಧನ್ಯವಾದಗಳು. ಅರಕಲಗೂಡು ಪರಿಸರದ ಎಷ್ಟೋ ಮಂದಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದವರಿದ್ದಾರೆ. ಮೊನ್ನೆ ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರಿಗೆ ಬೈಪಾಸ್ ಸರ್ಜರಿ ಮಾಡಿದ ತಂಡದ ನೇತೃತ್ವ ವಹಿಸಿದ್ದವರು ಅರಕಲಗೂಡು ಸಂಪತ್ಕುಮಾರ್, ಅವರ ಸಹೋದರ ಅರಕಲಗೂಡು ಸೂರ್ಯ ಪ್ರಕಾಶ್ ದಿ ಇಂಡಿಯನ್ ಎಕ್ಸ್ ಪ್ರೆಸ್ ನವದೆಹಲಿ ಬ್ಯೂರೋದ ಮುಖ್ಯಸ್ಥರು, ಅರಕಲಗೂಡು ರಾಂಪ್ರಸಾದ್ ವಿದೇಶದಲ್ಲಿ ಹತ್ತು ಹಲವು ವಿವಿ ಗಳಿಗೆ ಅತಿಥಿ ಪ್ರೊಪೆಸರ್ ಆಗಿದ್ದಾರೆ... ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಗೆ ಅರಕಲಗೂಡು ರುದ್ರಪಟ್ಟಣ(ಸಂಗೀತ ಗ್ರಾಮ)ಅಗ್ರಮಾನ್ಯ ರನ್ನು ನೀಡಿದೆ. ಹೀಗೆ ಹೇಳುತ್ತಾ ಹೋದರೆ ಇಲ್ಲಿನ ಪರಿಸರದ್ದೇ ಹೇಳುವುದು ಬಹಳಷ್ಟಾಗುತ್ತೆ. ಇರಲಿ ಮುಂದೆ ಈ ಬಗ್ಗೆ ಹೇಳುತ್ತೇನೆ. ಕನ್ನಡ ಬಳಕೆ ಬಗ್ಗೆ ಕೇಳಿದಿರಿ ನಿಮ್ಮ ಕಂಪ್ಯೂಟರ್ ನಲ್ಲಿ ನುಡಿ ಕನ್ನಡ ತಂತ್ರಾಂಶವಿದ್ದರೆ ಅದನ್ನು ಅನುಸ್ಥಾಪಿಸಿ ನುಡಿ ಡೈರೆಕ್ಟ್ ಆಪ್ಶನ್ ಕ್ಲಿಕ್ಕಿಸಿ, ಅದು ಟಾಸ್ಕ ಬಾರ್ ಮೇಲೆ ಸ್ಥಾಪಿತವಾದಾಗ ಅದರ ಮೇಲೆ right button ಕ್ಲಿಕ್ಕಿಸಿಅಲ್ಲಿ ಲಭ್ಯವಿರುವ ಯೂನಿಕೋಡ್ ಅನ್ನು ಆಯ್ಕೆ ಮಾಡಿ ನಂತರ ಬ್ಲಾಗ್ ನಲ್ಲಿ ಸುಲಭವಾಗಿ ಕನ್ನಡ ಬರೆಯಬಹುದು. ಸಂಶಯಗಳಿದ್ದರೆ ಪತ್ರ ಬರೆಯಿರಿ ಬೇಕೆನಿಸಿದರೆ ಪವರ್ ಪಾಯಿಂಟ್ ಪ್ರೆಸೆಂಟೆಶನ್ ನಲ್ಲಿ ಅದನ್ನು ತೋರಿಸುತ್ತೇನೆ. ನಿಮ್ಮ ಸಲಹೆ ಸಹಕಾರ ಹೀಗೆ ಇರಲಿ, ಅಂದಹಾಗೆ ತಾವು ಈಗ ಎಲ್ಲಿದ್ದೀರಿ ? ಏನು ಮಾಡುತ್ತೀದ್ದೀರಿ ಎಂಬುದನ್ನು ದಯಮಾಡಿ ತಿಳಿಸಿಕೊಡುತ್ತೀರೆಂದು ಭಾವಿಸಿರುತ್ತೇನೆ.