Wednesday, October 14, 2009

ಕ್ಯಾಂಪಸ್ ನತ್ತ ಭಟ್ಟರ "ಮನಸಾರೆ" ಸವಾರಿಮನಸಾರೆ ತಂಡ ಚಿತ್ರದ ಪ್ರಮೋಷನ್ ಗಾಗಿ ಊರೂರು ಸುತ್ತುತ್ತಿದೆ. "ಮನಸಾರೆ" ಚಿತ್ರದ ಕಥಾವಸ್ತು ಉತ್ತರ ಕರ್ನಾಟಕದ ಪರಿಸರದಲ್ಲಿ ನಡೆಯುವ ಒಂದು ಸುಂದರ ಪ್ರೇಮ ಕಾವ್ಯ. ಬದುಕಿನ ನೈಜ ಸತ್ಯಗಳನ್ನು ಫಿಲ್ಟರ್ ಇಲ್ಲದಂತೆ ಹೊರಹಾಕುವ ಸಂಭಾಷಣೆ. ಕಣ್ಣಿಗೆ ತಂಪೆನಿಸುವ ಸುಂದರ ಛಾಯಾಗ್ರಹಣ, ಉತ್ತಮ ಸಂಕಲನ, ದಿಗಂತ್ ಹಾಗೂ ಅಂದ್ರಿತಾ ರೇ ಯವರ ಅತ್ಯುತ್ತಮವೆನಿಸುವ ಅಭಿನಯವಿರುವ ಮನಸಾರೆ ಒಂದು ಉತ್ತಮ ಅಭಿರುಚಿಯ ಚಿತ್ರ. ಈ ಚಿತ್ರ ಬಿಡುಗಡೆಯಾದ ಸಂಧರ್ಭದಲ್ಲಿಯೇ ಉತ್ತರ ಕರ್ನಾಟಕದ ೧೨ ಜಿಲ್ಲೆಗಳು ನೆರೆಗೆ ಸಿಲುಕಿ ನಲುಗಿದೆ. ಅದರೂ ಚಿತ್ರದ ಓಟಕ್ಕೇನೂ ಅಡ್ಡಿಯಾಗಿಲ್ಲ ಎನ್ನುತ್ತಾರೆ ಭಟ್ಟರು, ಅಲ್ಲಿನ ಜನ ನೆರೆಯಲ್ಲೂ ಚಿತ್ರ ನೋಡಿ ಸಂತಸ ಪಡುತ್ತಿದ್ದಾರಂತೆ. ಮನಸಾರೆ ರಾಜ್ಯಾಧ್ಯಂತ 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡು ಸದ್ದಿಲ್ಲದೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ಳುತ್ತಿದೆ ಇದನ್ನು ಇನ್ನೂ ಉತ್ತೇಜಿಸಲು ಚಿತ್ರದ ನಿರ್ದೇಶಕ ಯೋಗರಾಜಭಟ್, ನಾಯಕ ದಿಗಂತ್ ಮತ್ತು ನಾಯಕಿ ಐಂದ್ರಿತಾ ರೇ ಮತ್ತು ಇತರ ನಟರೊಂದಿಗೆ ರಾಜ್ಯಾಧ್ಯಂತ ಪ್ರವಾಸ ಕೈಗೊಂಡಿದ್ದಾರೆ. ಯುವ ಸಮೂಹವನ್ನು ಚಿತ್ರದೆಡೆಗೆ ಆಕರ್ಷಿಸುವುದು ಮನಸಾರೆ ಯ ಮುಖ್ಯ ಅಜೆಂಡಾ ಅಂತೆ. ಯಾಕ್ರಿ ಭಟ್ರೆ ಕ್ಯಾಂಪಸ್ ಕಡೆಗೆ ಹೊರಟ್ರೀ ? ಅಂತಾ ಪ್ರಶ್ನಿಸಿದರೆ, ಇದು ಯುವ ಸಮೂಹದ ಚಿತ್ರ ಇಲ್ಲಿ ಸಂದೇಶ ವಿದೆ ವಿಚಾರವಿದೆ ಅದು ಅವರನ್ನು ತಲುಪಬೇಕು ಹಾಗಾಗಿ ಇವೆಲ್ಲಾ ಎಂದು ಮುಗುಳ್ನಕ್ಕರು ಭಟ್ಟರು.
ಮೊದಲ ಹಂತದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಮನಸಾರೆ ತಂಡ ಮೊನ್ನೆ ಹಾಸನಕ್ಕೆ ಬಂದಿತ್ತು. ಬಂದವರೇ ಸೀದಾ ಹೆಣ್ಣುಮಕ್ಕಳ ಎವಿಕೆ ಕಾಲೇಜಿಗೆ ಭೇಟಿ ನೀಡಿತು. ಮನಸಾರೆಯ ಉತ್ಸಾಹ ಕಂಡು ಹಿಗ್ಗಿ ಹೀರೇಕಾಯಿ ಆದ ಭಟ್ಟರು ಕಾಲೇಜು ವಿದ್ಯಾರ್ಥಿಗಳಿಗೆ ಒಂದು ಪ್ರದರ್ಶನವನ್ನು ಒಮ್ಮೆ ಮಾತ್ರ ಉಚಿತವಾಗಿ ತೋರಿಸಲಾಗುವುದು ಎಂದು ಘೋಷಿಸಿದರು. ಹೀಗೆ ತಂಡ ರಾಜ್ಯಾಧ್ಯಂತ ತನ್ನ ಪ್ರವಾಸವನ್ನು ಮುಂದುವರೆಸಿದೆ. ಈ ಸಂಧರ್ಭದಲ್ಲಿ ಅವರನ್ನು ಮಾತಿಗೆಳೆದಾಗ ಭಟ್ಟರು ತಮ್ಮ ಅನುಭವಗಳನ್ನು ಹಂಚಿಕೊಂಡರು.
  • ಮನಸಾರೆ ಪ್ರದರ್ಶನ ರಾಜ್ಯಾಧ್ಯಂತ ಹೇಗಿದೆ?

-ಅದ್ಭುತವಾಗಿದೆ... ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ. ಉತ್ತರಕರ್ನಾಟಕದ ಜನ ನೆರೆಯಲ್ಲೂ ಚಿತ್ರ ನೋಡ್ತೀದಾರೆ ಇದು ಅಚ್ಚರಿಯ ಸಂಗತಿ. ಮಳೆ ಬಂದಾಗ ಸ್ವಲ್ಪ ಕಡಿಮೆಯಾಗಿತ್ತಾದರೂ ನಂತರದ ಫಲಿತಾಂಶ ನನ್ನ ನಿರೀಕ್ಷೆ ಮೀರಿದ್ದು.

  • ಕಾಲೇಜು ಕ್ಯಾಂಪಸ್ ಕಡೆ ಮೊದಲ ಸಲ ಹೋಗ್ತದೀರಿ, ಪ್ರತಿಕ್ರಿಯೆ ಹೇಗಿದೆ?

- ಕ್ಯಾಂಪಸ್ ಕಡೆ ಹೋಗ್ತಿರೋದು ಇದೇ ಮೊದಲಲ್ಲ, ಈ ಹಿಂದೆ ಮುಂಗಾರು ಮಳೆ ಸಿನಿಮಾ ಬಂದಾಗ ನಾನು, ಗಣೇಶ
ಇಬ್ರೂ ಹೋಗಿದ್ವಿ, ನಂತರದಲ್ಲಿ ನಾನೊಬ್ಬನೇ ತಾಲ್ಲೂಕು ಕೇಂದ್ರಗಳಿಗೂ ಹೋಗಿದ್ದೇನೆ. ಅವಾಗಿನ ಕ್ರೌಡು ಬೇರೆ, ಈಗಿನದ್ದೇ ಬೇರೆ. ಯುವ ಸಮೂಹದ ಪ್ರತಿಕ್ರಿಯೆ ಸಖತ್ತಾಗಿದೆ. ಯೂತ್ಸ್ ಇಷ್ಟೊಂದು ರೆಸ್ಪಾನ್ಸ್ ಮಾಡ್ತಾರೆ ಅಂದಕೊಂಡಿರಲಿಲ್ಲ. ಹೊದಕಡೆಯೆಲ್ಲ ಹುಡುಗೀರು ದಿಗಂತ ನನ್ನು ಮುತ್ತಿಗೆ ಹಾಕಿದ್ರೆ ಐಂದ್ರಿತಾ ರನ್ನು ಹುಡುಗರು ಮುತ್ತಿಕೊಳ್ತಾರೆ , ಅವರ ಅಭಿನಯವನ್ನು ಮತ್ತು ಚಿತ್ರವನ್ನು ಪ್ರಶಂಸಿಸುತ್ತಿದ್ದಾರೆ.ಮನಸಾರೆ ಗೆ ಹುಡುಗ-ಹುಡುಗಿಯರ ದೊಡ್ಡ ಆಶೀರ್ವಾದವಿದೆ.

  • ಮಾಸ್ ಪ್ರತಿಕ್ರಿಯೆ ಹೇಗಿದೆ?

-ನೋಡಿ ನನ್ನ ಪ್ರಕಾರ ಮಾಸ್ ಅಂತೇನಿಲ್ಲ, ಅದು ಅವತ್ತಿಗೂ ಇಲ್ಲ, ಇವತ್ತಿಗೂ ಇಲ್ಲ. ನನ್ನ ಕನ್ನಡದ ಜನರು ಮತ್ತು ಇತರರು ಅವರ ಪ್ರತಿಕ್ರಿಯೆ ಚೆನ್ನಾಗಿದೆ ಅವರು ನಮ್ಮನ್ನು ಆಶೀರ್ವದಿಸುತ್ತಿದ್ದಾರೆ. ನಮ್ಮ ಜನ ನೋಡ್ತೀದಾರೆ ಅನ್ನೊದೆ ಒಂದು ಖುಷಿ. ಇದನ್ನೆಲ್ಲ ನೋಡ್ತಾ ನಾವು ಮಜಾ ತಗೋತೀದೀವಿ.

  • ಎಲ್ಲೆಲ್ಲಿ ಭೇಟಿ ನೀಡಿದ್ದೀರಿ? ಕಲೆಕ್ಷನ್ ಹೇಗಿದೆ ?

ಈ ಗಾಗಲೆ ರಾಜ್ಯದ ೧೨ ಜಿಲ್ಲೆಗಳಲ್ಲಿ ಭೇಟಿ ನೀಡಿದ್ದೇವೆ ಇನ್ನೂ ಪ್ರವಾಸ ಮಾಡಬೇಕಿದೆ. ಚಿತ್ರ ನಿಧಾನವಾಗಿ ಟೆಂಪೋ ತೆಗೆದುಕೊಳ್ತಿದೆ. ನನ್ನ ಹಿಂದಿನ ಚಿತ್ರಗಳು ಸಹಾ ಹಾಗೆಯೇ ನಿಧಾನವಾಗಿ ಮೇಲೆ ಬಂದವು. ಆದರೆ ಮನಸಾರೆ ಸ್ಪೀಡ್ ಜಾಸ್ತಿಯಾಗಿದೆ. ಒಳ್ಲೇ ಪವರ್ ಫುಲ್ ನಿರ್ಮಾಪಕರು ಇದ್ದಾರೆ ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರದ ಓಟಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಚಿತ್ರ 50ದಿನ, 100ದಿನ ಓಡುವ ಸಂಧರ್ಭಕ್ಕೆ ನಿರ್ಮಾಪಕರು ಬಿಡುವು ಮಾಡಿಕೊಂಡು ಜೊತೆಯಾಗಲಿದ್ದಾರೆ. ಎಲ್ಲ ಕೇಂದ್ರಗಳಲ್ಲು ಕಲೆಕ್ಷನ್ ಚೆನ್ನಾಗಿದೆ.

  • ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ನಿರೀಕ್ಷೆ ಏನು?

-ಇನಿಷಿಯಲ್ ಗೆ ಇಷ್ಟೊಂದು ಯಶಸ್ಸು ಆಗುತ್ತೇ ಅಂತಾ ಖಂಡಿತಾ ಗೊತ್ತಿರಲಿಲ್ಲ, ಇದು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ. ಜನರ ಹಾರೈಕೆ ಆಶೀರ್ವಾದ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ಮಾತು ಮುಗಿಸಿದರು ಭಟ್ಟರು.5 comments:

ಎಚ್.ಎನ್. ಈಶಕುಮಾರ್ said...

ಮನಸಾರೆಗೆ ಮನಸೋತಿರೋ ಹಾಗಿದೆಯಲ್ಲ ಗೆಳೆಯರೇ...

ಅರಕಲಗೂಡುಜಯಕುಮಾರ್ said...

Not so ..:)Sir, I wrote a interview for cinema page na, that i put into blog... personally i liked Yogarajabhat as a Director.

ಜಲನಯನ said...

ರಮೇಶ್, ನೀವು ವರದಿಗಾರರು ಎನ್ನುವುದನ್ನು ನಿಮ್ಮ ಲೇಖನ ತಿಳಿಸುತ್ತೆ...ನಿಮ್ಮ ಸುತ್ತಮುತ್ತಲ ಚರಿತ್ರಾರ್ಹ ಕ್ಷೇತ್ರಗಳ (ಲೆಸ್ ನೋನ್ ಅಂತಾರಲ್ಲ..ಅಂಥವು) ಬಗ್ಗೆ ತಿಳಿಸಿ ನಿಮ್ಮ ಬ್ಲಾಗಿನಲ್ಲಿ..
ನಿಮಗೆ ನಿಮ್ಮ ಬ್ಲಾಗ್ ಬರವಣಿಗೆಗೆ ಶುಭವಾಗಲಿ

ಅರಕಲಗೂಡುಜಯಕುಮಾರ್ said...

Sir, I am not Ramesh, my name is Arkalgud Jayakumar. Thanks for ur suggestion, I wrote many articles regarding my surrounding places, if u want to see dat please click on old posts at the bottom of my blogspot. Keep writing.

ಗೌತಮ್ ಹೆಗಡೆ said...

manasaare yaare aadaru manasaare mechchikolluvantide sir:) kannadadavaru yaarigu kadime illa:)